Akasha Ishte Yaakideyo ( Kannada ) – Gaalipata – Kannada songs

 

Akasha Ishte Yaakideyo ( Kannada ) – Gaalipata – Kannada songs – Tippu, Kunal Ganjawala Lyrics

Singer Tippu, Kunal Ganjawala
Music V Harikrishna
Song Writer Jayant Kaikini, Yograj Bhat, HrudayaShiva

ನನೈ ನನನೈ….. ನನೈ ನನನೈ…… ನನೈ ನನನೈನಿ….. ನನೈ ನನನೈ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ…..ಗಾಳಿಪಟ ಗಾಳಿಪಟ ಗಾಳಿಪಟ

ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ…..ಗಾಳಿಪಟ ಗಾಳಿಪಟ ಗಾಳಿಪಟ

ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೆ ನಮ್ಮ ಚಟ….ಗಾಳಿಪಟ ಗಾಳಿಪಟ ಗಾಳಿಪಟ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ…..ಗಾಳಿಪಟ ಗಾಳಿಪಟ ಗಾಳಿಪಟ

1 thought on “Akasha Ishte Yaakideyo ( Kannada ) – Gaalipata – Kannada songs”

Leave a Comment

Your email address will not be published. Required fields are marked *